ಹೆಬ್ರಿಯಲ್ಲಿ ಸಂಭ್ರಮದ ಆಟಿ ಕಾರ್ಯಕ್ರಮ

ಹೆಬ್ರಿಯಲ್ಲಿ ಸಂಭ್ರಮದ ಆಟಿ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ವಲಯದ ವತಿಯಿಂದ ಚೈತನ್ಯ ಯುವ ಬೃಂದ ಇಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಚನಾಧಿಕಾರಿ ರೇಷ್ಮಾ ಮೇಡಂ ಇವರು ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಬಗ್ಗೆ, ಆಂಟಿ ತಿಂಗಳ ಹಿಂದಿನ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ ಕಷ್ಟದ ದಿನಗಳಲ್ಲಿ ತಿಂಡಿ ತಿನಿಸುಗಳನ್ನು ಕಾಡಿನ ಎಲ್ಲ ಕಾದ್ಯ ವಸ್ತುಗಳನ್ನು ಪರಿಚಯ ಮಾಡಿಸುತ್ತಾ ಆರೋಗ್ಯದ ಭದ್ರತೆ ಆಟಿ ಕಾರ್ಯಕ್ರಮ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಪೂಜಾರಿ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಮುನಿಯಲು ಇವರು ಮಾತನಾಡಿ. ಆಗಿನ ಕಾಲದಲ್ಲಿ ಆಟಿ ತಿಂಗಳು ಕಷ್ಟದ ದಿನಗಳು ಆಗಿತ್ತು ಆದರೆ ಈ ದಿನ ಅದು ಸುಖದ ದಿನಗಳು ಆಗಿದೆ ಎನ್ನುವುದನ್ನು ತಿಳಿಸುತ್ತಾ, ಹಿಂದಿನ ಕಾಲದಲ್ಲಿ ಬಡ ಜನರು ತಿನ್ನಲು ಆಹಾರವಿಲ್ಲದಿದ್ದಾಗ ಕಾಡಿನ ಎಲ್ಲ ಖಾದ್ಯ ಪದಾರ್ಥಗಳನ್ನು ತಿಂದು ತಮ್ಮ ಆರೋಗ್ಯವನ್ನು ಹಾಗೂ ಆಯುರ್ವೇದದ ಗಿಡಮೂಲಿಕೆ ಅಂತ ಕಷಾಯಗಳನ್ನು ಕುಡಿಯುವುದರ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತಿದ್ದರು ಎಂದು ಆರ್ಟಿ ಕಾರ್ಯಕ್ರಮದ ಸಿಹಿ ಹಾಗೂ ಕಹಿ ವಿಚಾರಗಳ ಬಗ್ಗೆ ವಿಮರ್ಶಿಸಿ ಮಾಹಿತಿ ಮಾರ್ಗದರ್ಶನ ನೀಡಿದರು. ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಗಿರುವ ಪ್ರವೀಣ್ ಹೆಗ್ಡೆ ಇವರು ಆರ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚೈತನ್ಯ ಯುವಬಂದದ ಕಾರ್ಯದರ್ಶಿಯಾಗಿರುವ ರಾಜೇಶ್ ಆಚಾರ್ಯ ಇವರು ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಿನಿ ಭಂಡಾರಿ ಹಾಗೂ ಪ್ರಸಾದ್ ಭಂಡಾರಿ ವಲಯ ಮೇಲ್ವಿಚಾರಕ ಹಚ್ ಉದಯ್ ಸೇವಾ ಪ್ರತಿನಿಧಿ ಕಾಂತಿ, ನಾಗರತ್ನ, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಬಗೆಯ ತಿಂಡಿ ತಿನುಸುಗಳನ್ನು ಎಲ್ಲರಿಗೂ ವಿತರಿಸಿದರು. ವಿಜಯ್ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *