ಗಂಟುಬೀಳು ಶಾಲೆಯಲ್ಲಿ ಬಣ್ಣ ಬಳಿದು ಚಿಣ್ಣರಿಗೆ ಸ್ವಾಗತ
ಕುಂದಾಪುರ ವಲಯದ ಆರ್ಡಿ ಅಲ್ಬಾಡಿ ಕ್ಲಸ್ಟರ್ ವ್ಯಾಪ್ತಿಯ ಗ್ರಾಮೀಣ ಪ್ರದೇಶವಾದ ಗಂಟುಬೀಳು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 1ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ ಶಿಕ್ಷಕ ಮಹಾಸಭೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ರಂಜಿತ್ ಇವರು ವಹಿಸಿಕೊಂಡರು .ಉಪಾಧ್ಯಕ್ಷೆ ರೇಣುಕಾ ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶಾರದಾ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಕೈ ಗೆ ಬಣ್ಣ ಬಳಿದು ಚಿತ್ತಾರ ಬರೆದು ಮೊದಲ ದಿನ ಸಂಭ್ರಮಿಸಿದರು. ಹಾಗೆಯೇ welcome board ನಲ್ಲಿ ವಿದ್ಯಾರ್ಥಿಗಳ ಫೋಟೋ ತೆಗೆದು ಮೊದಲ ದಿನ ವನ್ನು ಸ್ಮರಣೀಯವಾಗಿಸಿ ಕೊಂಡರು.

