ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ
ಕೋಟ: ಇಲ್ಲಿನ ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಕೊಡಮಾಡಿದ ಕಂಪ್ಯೂಟರ್ ಹಾಗೂ ಅದರ ಕೊಠಡಿಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಸರಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಕೋಡಿ ತಲೆಯ ಶಾಲೆಯ ಶಿಕ್ಷಕರ ಕುರಿತಂತೆ ಮುಖ್ಯ ಶಿಕ್ಷಕಿಯೊಂದಿಗೆ ಶಾಸಕರು ಚರ್ಚಿಸಿದರು.
ಶಾಲಾ ಅಂದಿನ ವಿದ್ಯಾರ್ಥಿ ಮೈಸೂರಿನಲ್ಲಿ ನೆಲೆಸಿರುವ ದಾನಿ ಭಾನುಮತಿ, ಕೊಠಡಿ ದಾನಿಗಳಾದ ಬೆಂಗಳೂರಿನ ಜಯವರ್ಧನಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೋಡಿ ತಲೆ ಶಾಲೆಯ ಮುಖ್ಯ ಶಿಕ್ಷಕಿ ಟಿ. ನಾಗರತ್ನ, ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಖಾರ್ವಿ, ಮಾಜಿ ಸದಸ್ಯರಾದ ಕೃಷ್ಣ ಪೂಜಾರಿ, ಅಣ್ಣಪ್ಪ ಕುಂದರ್, ಕೋಡಿ ಭಾಗದ ಮುಖಂಡರಾದ ಸುಧೀರ್ ಕುಮಾರ್, ಸುದಿನ, ಗುತ್ತಿಗೆದಾರ ಉದಯ್ ಕಾಂಚನ್, ಗಣಕ ವಿಜ್ಞಾನ ಶಿಕ್ಷಕಿ ಸುಪ್ರಿತಾ, ಹೇಮಾ ಮತ್ತಿತರರು ಉಪಸ್ಥಿತರಿದ್ದರು.

