ಜೂನ್ 7 : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ

ಉಡುಪಿ : ನಗರದ ಪ್ರತಿಷ್ಠಿತ ಎಂಜಿಎಂ ಕಾಲೇಜು ಬಳಿ ಕಳೆದ ಎರಡು ವರ್ಷಗಳಿಂದ ಕಾರ್ಯಚರಿಸುತ್ತಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದಕೋ ಆಪರೇಟಿವ್ ಸೊಸೈಟಿ ಲಿ. ನ ವಾರ್ಷಿಕ ಮಹಾಸಭೆಯು ಜೂನ್ 7ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನೂತನ ರವೀಂದ್ರ ಮಂಟಪ ಎಂಜಿಎಂ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಡಿಸೋಜ ತಿಳಿಸಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ ಗ್ರಾಹಕರಿಂದ ಸೊಸೈಟಿಗೆ ಉತ್ತಮ ವ್ಯವಹಾರ ದೊರಕಿದ್ದು, ದಿನೇ ದಿನೇ ಉತ್ತಮ…

Read More

ಪ್ರಧಾನಿ ಮೋದಿ ಭಾರತಕ್ಕೆ ಮಾತ್ರವಲ್ಲ, ಪ್ರಪಂಚದ ಹೆಮ್ಮೆ : ಯಶಪಾಲ್ ಸುವರ್ಣ

ಮೋದಿಯವರ ಸಮರ್ಥ ಆಡಳಿತ, ಭಾರತವನ್ನು ಬಲಿಷ್ಠಗೊಳಿಸಿದೆ. ಅವರು ಕೈಗೊಂಡ ಅಭಿವೃದ್ಧಿಯ ಕಾರ್ಯಗಳನ್ನು ವಿಶ್ವವೇ ಬೆರಗಾಗಿ ನೋಡಿದೆ. ಮೋದಿಯವರು ದೇಶ ಮಾತ್ರವಲ್ಲ ಪ್ರಪಂಚದ ಹೆಮ್ಮೆ ಎಂಬುದಾಗಿ ಶಾಸಕ ಯಶಪಾಲ್ ಸುವರ್ಣ ಹೇಳಿದರು. ಅವರು ಉಡುಪಿ ಜಿಲ್ಲೆಯ ಬಿಜೆಪಿ ಮತ್ತು ಜಿಲ್ಲಾ ರೈತ ಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಜೂನ್ 5 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ 12ವರ್ಷಗಳ ಅಭಿವೃದ್ಧಿ ಪರ ಆಡಳಿತದ ಅಭಿಯಾನ ಕಾರ್ಯಕ್ರಮದಲ್ಲಿ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ…

Read More

ಇಂದು ನೀಲಾವರ ಗೋಶಾಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ12 ವರ್ಷದ ಆಡಳಿತ ಸಾಧನೆಯ ಅಭಿಯಾನ

ದಿನಾಂಕ 05/06/2026 ನೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನೀಲಾವರ ಗೋಶಾಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 12 ವರ್ಷ ಆಡಳಿತದ ಸಾಧನೆಯ ಜಿಲ್ಲಾ ಮಟ್ಟದ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಸಂಸದರು, ಶಾಸಕರು ಮತ್ತು ಪ್ರಮುಖರು ಭಾಗವಹಿಸುವರಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಉಪಸ್ಥಿತರಾಗಬೇಕಾಗಿ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು, ಸಮಾಜ ಸೇವಕರೂ ಆದ ಕಮಲಾಕ್ಷ ಹೆಬ್ಬಾರ್ ಪೇತ್ರಿ ಮನವಿ ಮಾಡಿದ್ದಾರೆ

Read More

ಕೋಟ ಪಂಚವರ್ಣದಿಂದ ಜೂನ್ 4ರಂದು ಪುನಿತ್ ರಾಜ್ ಕುಮಾರ್ ವಿದ್ಯಾನಿಧಿ ಯೋಜನೆ, ವಿದ್ಯಾ ಪರಿಕರ ವಿತರಣೆ

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಪುನಿತ್ ರಾಜ್ ಕುಮಾರ್ ವಿದ್ಯಾನಿಧಿ ಯೋಜನೆಯಡಿ ಶೈಕ್ಷಣಿಕ ದತ್ತು ಪಡೆದ ಹಾಗೂ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾ ಪರಿಕರ ವಿತರಣೆ ಕಾರ್ಯಕ್ರಮ ಜೂ.4ರ ಗುರುವಾರ ಸಂಜೆ 5.45ಕ್ಕೆ ಕೋಟದ ಸಮುದ್ಯತಾ ಸಭಾಂಗಣದಲ್ಲಿ ಜರಗಲಿದೆ.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಾಪೋಷಕರಾದ ಆನಂದ್ ಸಿ ಕುಂದರ್ ಹಾಗೂ ಕೃಷ್ಣಪ್ರಸಾದ್ ಕ್ಯಾಶು,ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಸಂಪತ್ ಕುಮಾರ್ ಶೆಟ್ಟಿ, ಸ್ನೇಹಕೂಟದ ಅಧ್ಯಕ್ಷೆ, ಸಲಹಾ ಸಮಿತಿ ಸದಸ್ಯೆ ಭಾರತಿ ಮಯ್ಯ ಸೇರಿದಂತೆ…

Read More

ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ

ಕೋಟ: ಇಲ್ಲಿನ ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಕೊಡಮಾಡಿದ ಕಂಪ್ಯೂಟರ್ ಹಾಗೂ ಅದರ ಕೊಠಡಿಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಸರಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಕೋಡಿ ತಲೆಯ ಶಾಲೆಯ ಶಿಕ್ಷಕರ ಕುರಿತಂತೆ ಮುಖ್ಯ ಶಿಕ್ಷಕಿಯೊಂದಿಗೆ ಶಾಸಕರು ಚರ್ಚಿಸಿದರು. ಶಾಲಾ ಅಂದಿನ ವಿದ್ಯಾರ್ಥಿ ಮೈಸೂರಿನಲ್ಲಿ ನೆಲೆಸಿರುವ ದಾನಿ ಭಾನುಮತಿ, ಕೊಠಡಿ ದಾನಿಗಳಾದ ಬೆಂಗಳೂರಿನ ಜಯವರ್ಧನಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೋಡಿ ತಲೆ ಶಾಲೆಯ ಮುಖ್ಯ ಶಿಕ್ಷಕಿ ಟಿ. ನಾಗರತ್ನ,…

Read More