ಉಡುಪಿ: ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ನಿ., ಉಡುಪಿಯ 2025–2026ನೇ ಸಾಲಿನ 12ನೇ ವಾರ್ಷಿಕ ಮಹಾಸಭೆ
ಉಡುಪಿ: ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ನಿ., ಉಡುಪಿಯ 2025–2026ನೇ ಸಾಲಿನ 12ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾದ ಶ್ರೀ ದಿನೇಶ ಸಿ ನಾಯ್ಕ್ ಸಭೆಯನ್ನು ಉದ್ಘಾಟಿಸಿದರು. ಬಳಿಕ ಶ್ರೀ ಪ್ರಶಾಂತ್ ಶಿರೂರು ಮುಖ್ಯಕಾರ್ಯನಿರ್ವಾಣಾಧಿಕಾರಿ ಅವರು ಸಭೆಯ ಕಾರ್ಯಸೂಚಿಯನ್ನು ವಾಚಿಸಿದರು. ನಂತರ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ಲಾಭದ ವಿನಿಯೋಗ, ಆಯವ್ಯಯ ಸೇರಿದಂತೆ ವಿವಿಧ ಕಾರ್ಯಸೂಚಿಗಳನ್ನು ಸದಸ್ಯರ ಅನುಮೋದನೆಗೆ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಸ್. ನಾಯಕ್, ಉಪಾಧ್ಯಕ್ಷರಾದ ಶ್ರೀ ಗಣೇಶ್, ನಿರ್ದೇಶಕರಾದ ಶ್ರೀ ಆರ್. ಸಿ. ನಾಯ್ಕ್ ಮಾಧವ್, ಶ್ರೀ ಕೃಷ್ಣ ನಾಯ್ಕ್, ಶ್ರೀ ಲಕ್ಷ್ಮಣ್ ನಾಯ್ಕ್, ಶ್ರೀ ಕರುಣಾಕರ ಕಾಂಚನ್, ಶ್ರೀ ಹರೀಶ್ ನಾಯ್ಕ್, ಶ್ರೀ ಸತೀಶ್ ನಾಯ್ಕ್, ಶ್ರೀ ರಘುನಾಥ್ ನಾಯ್ಕ್, ಶ್ರೀ ಚಂದ್ರ ಎಚ್. ನಾಯ್ಕ್, ಶ್ರೀ ಶೇಖರ್ ಡಿ. ಶೆಟ್ಟಿ, ಶ್ರೀಮತಿ ಜ್ಯೋತಿ ಎಮ್. ಶೆಟ್ಟಿ, ಶ್ರೀಮತಿ ಶೋಭಾ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಪ್ರಶಾಂತ್ ಶಿರೂರ್ ಉಪಸ್ಥಿತರಿದ್ದರು.2025–2026ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನೋಟ್ ಬುಕ್ ವಿತರಣೆ ಹಾಗೂ ಪ್ರೋತ್ಸಾಹ ಧನ, ಹಾಗೂ ಗೌರವ ಸ್ಮರಣಿಕೆ ನೀಡಲಾಯಿತು.
ಸಮಯ ಪಾಲನೆ ಎಂಬುದು ಉತ್ತಮ ವ್ಯಕ್ತಿತ್ವದ ಪ್ರತೀಕ, ಸಮಯ ಪಾಲನೆ ಮಾಡಿ ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾದ ನಾರಾಯಣ ನಾಯ್ಕ್, ಶ್ರೀಮತಿ ಗೀತಾ ಜಿ, ಬಾಲಾಜಿ ನಾಯ್ಕ್ ಹಾವಂಜೆ ರವರಿಗೆ ಅಭಿನಂದಿಸಲಾಯಿತು.ಪೊಲೀಸ್ ಇನ್ಸ್ಪೆಕ್ಟರ್ ಆದ ಮಹೇಶ್ ಪ್ರಸಾದ್ ರವರು ಸಹಕಾರಿ ಸಂಘದ ವೆಬ್ಸೈಟ್ ಅನಾವರಣಗೊಳಿಸಿದರು. ಹಾಗೆಯೇ ಸಂಘದ ಪಾರದರ್ಶಕತೆಯ ಕುರಿತು ವೇದಿಕೆಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಇವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೆಯೇ ನಿರ್ದೇಶಕರಾದ ಚಂದ್ರ ಎಚ್ ನಾಯ್ಕ್ ರವರು ವೇದಿಕೆಯಲ್ಲಿ ಮಾತನಾಡಿ ಸನ್ಮಾನ ವನ್ನು ಸ್ವೀಕರಿಸಿದರು.
ಕೊನೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಸ್. ನಾಯಕ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಸಭೆಗೆ ಆಗಮಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

