ಶಿಕ್ಷಣದಿಂದ ಮಾತ್ರ ಸಮಾಜವನ್ನು ಮುಂದೆ ತರಲು ಸಾಧ್ಯ: ಅಕ್ಷರದಕ್ಕರೆ ಕಾರ್ಯಕ್ರಮದಲ್ಲಿ ಧರ್ಮ ರತ್ನಾಕರ ಕೋಟ ಆನಂದ ಸಿ ಕುಂದರ್
ಶಿಕ್ಷಣದಿಂದ ಸಮಾಜವನ್ನು ಮುಂದೆ ತರಲು ಸಾಧ್ಯ. ಶಿಕ್ಷಣವನ್ನು ಕದಿಯಲು ಸಾಧ್ಯವಿಲ್ಲ. ಅದಕ್ಕೆ ಮಹತ್ವ ನೀಡಬೇಕು. ಜಾತಿ ಮತ ಭೇದ ಇಲ್ಲದೆ ಶಿಕ್ಷಣ ಎಲ್ಲರಿಗೂ ಸಿಗಲಿ. ದಸಂಸದ ಇಂತಹ ಕಾರ್ಯ ನಿರಂತರವಾಗಿ ಸಾಗಲಿ ಎಂದು ಧರ್ಮ ರತ್ನಾಕರ, ಅಧುನಿಕ ಬಸವಣ್ಣ ಉದ್ಯಮಿ ಕೋಟ ಆನಂದ ಸಿ ಕುಂದರ್ ಹೇಳಿದರು. ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಕೋಟ ಸಿ ಎ ಬ್ಯಾಂಕ್ನಲ್ಲಿ ಮೇ .30ರಂದು ನಡೆದ ಅಕ್ಷರದಕ್ಕರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ನಾಗರಾಜ ಪಡುಕರೆ ವಹಿಸಿದ್ದರು. ಉದ್ಘಾಟನೆಯನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರೀತಮ್ ಪೂಜಾರಿ ಮತ್ತು ಮಹಾಲಕ್ಷ್ಮಿ ಸಿ ಜಿ ನೆರವೇರಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಉಡುಪಿ ಜಿಲ್ಲಾ ಸಂಘಟನೆಯ ಸಂಚಾಲಕರಾದ ಟಿ ಮಂಜುನಾಥ್ ಗಿಳಿಯಾರು, ಕಳೆದ 27 ವರ್ಷಗಳಿಂದ ಸಂಘಟನೆಯಿಂದ ಫಲಾನುಭವಿಗಳಾದ ಹಲವಾರು ಮಂದಿ ಇಂದು ಸಮಾಜದಲ್ಲಿ ಉತ್ತಮ ಗೌರವ ಸ್ಥಾನದಲ್ಲಿ ಇದ್ದು, ಸಂಘಟನೆಯ ಇಂತಹ ಕಾರ್ಯಕ್ರಮಗಳಿಗೆ ಈಗ ಬೆಂಬಲ ಕೊಡುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿಯಾಗಿದೆ. ಈಗಿನ ಮಕ್ಕಳೂ ಕೂಡ ಸಾಧನೆಯ ಹಾದಿಯಲ್ಲಿ ನಡೆಯುವಂತೆ ಆಗಲಿ ಎಂದು ಹೇಳಿದರು. ಇದೇ ವೇದಿಕೆಯಲ್ಲಿ ಬಿಎಸ್ಎನ್ಎಲ್ ಉದ್ಯೋಗಿ ಪ್ರಭಾಕರ ಮತ್ತು ಉಪನ್ಯಾಸಕ ಮಂಜುನಾಥ್ ಎಸ್ ಕೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರೂ ಮತ್ತು ಸಮಾಜದ ಮುಖಂಡರುಗಳಾದ ಸುಂದರ್ ಮಾಸ್ತರ್, ಶ್ಯಾಮರಾಜ ಬಿರ್ತಿ, ಮೊಳಹಳ್ಳಿ ದಿನೇಶ್ ಹೆಗ್ಡೆ, ಡಾ. ಕೆ ಕೃಷ್ಣ ಕಾಂಚನ್, ಸಂಜೀವ ಗುಂಡ್ಮಿ, ಪ್ರೇಮಾನಂದ ಬಾರ್ಕೂರು, ಕೆ ಸಿ ರಾಜು ಬೆಟ್ಟಿನಮನೆ, ಗೀತಾ ಸುರೇಶ್, ಮಂಜುನಾಥ್ ಬಾಳ್ಕುದ್ರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ಶ್ರೀನಿವಾಸ ವಡ್ಡರ್ಸೆ, ವಿಜಯ ಗಿಳಿಯಾರು, ಪ್ರಶಾಂತ್ ಬಿರ್ತಿ, ರವಿ ಬನ್ನಾಡಿ, ಪ್ರಭಾಕರ ಪಡುಕರೆ, ಮಂಜುನಾಥ್ ಎಸ್ ಕೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ ಮತ್ತಿತರ ಕಾರ್ಯಕ್ರಮಗಳು ನಡೆಯಿತು.

