ರೋಟರಿ ಕುಂದಾಪುರ ಮಿಡ್ ಟೌನ್ ಕ್ರೀಡಾ ಸಮವಸ್ತ್ರ ವಿತರಣೆ

ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ವತಿಯಿಂದ,ಕ್ಲಬ್ ನ ಮಾಜಿ ಅಧ್ಯಕ್ಷ ದಿ. ಸಟ್ವಾಡಿ ಸುಧೀರ್ ಹೆಗ್ಡೆಯವರ ಸ್ಮರಣಾರ್ಥವಾಗಿ, ಗಿರಿಜಾ ಚಂದ್ರಶೇಖರ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರ್ಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ಹಸ್ತಾಂತರಿಸಲಾಯಿತು

ಕ್ಲಬ್ ನ ಅಧ್ಯಕ್ಷರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ರೋಟರಿ ಕ್ಲಬ್ ಸದಸ್ಯರಾದ,ರಂಜಿತ್ ಕುಮಾರ್ ಶೆಟ್ಟಿ ಕೆ. ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.

ರವಿರಾಜ ಶೆಟ್ಟಿ ಎಚ್., ಸುನಿಲ್ ಕುಮಾರ್ ಶೆಟ್ಟಿ, ಶ್ರೀಕಾಂತ ಶೆಟ್ಟಿ ಎಸ್., ಉದಯ ಶೆಟ್ಟಿ ಆಜ್ರಿ, ಶಾಲೆಯ ಎಸ್. ಡಿ .ಎಂ .ಸಿ. ಅಧ್ಯಕ್ಷರಾದ ಅಂಬಿಕಾ, ನಿವೃತ್ತ ಮುಖ್ಯ ಶಿಕ್ಷಕರಾದ ಜಯಕರ ಹೆಗ್ಡೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಗೀತಾ ಶೆಟ್ಟಿ ಸ್ವಾಗತಿಸಿದರು,ಶಿಕ್ಷಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಕೋಮಲ ಶೆಟ್ಟಿ ವಂದಿಸಿದರು.

Leave a Reply

Your email address will not be published. Required fields are marked *