ಪ್ರಧಾನಿ ಮೋದಿ ಭಾರತಕ್ಕೆ ಮಾತ್ರವಲ್ಲ, ಪ್ರಪಂಚದ ಹೆಮ್ಮೆ : ಯಶಪಾಲ್ ಸುವರ್ಣ
ಮೋದಿಯವರ ಸಮರ್ಥ ಆಡಳಿತ, ಭಾರತವನ್ನು ಬಲಿಷ್ಠಗೊಳಿಸಿದೆ. ಅವರು ಕೈಗೊಂಡ ಅಭಿವೃದ್ಧಿಯ ಕಾರ್ಯಗಳನ್ನು ವಿಶ್ವವೇ ಬೆರಗಾಗಿ ನೋಡಿದೆ. ಮೋದಿಯವರು ದೇಶ ಮಾತ್ರವಲ್ಲ ಪ್ರಪಂಚದ ಹೆಮ್ಮೆ ಎಂಬುದಾಗಿ ಶಾಸಕ ಯಶಪಾಲ್ ಸುವರ್ಣ ಹೇಳಿದರು. ಅವರು ಉಡುಪಿ ಜಿಲ್ಲೆಯ ಬಿಜೆಪಿ ಮತ್ತು ಜಿಲ್ಲಾ ರೈತ ಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಜೂನ್ 5 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ 12ವರ್ಷಗಳ ಅಭಿವೃದ್ಧಿ ಪರ ಆಡಳಿತದ ಅಭಿಯಾನ ಕಾರ್ಯಕ್ರಮದಲ್ಲಿ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ…

