Headlines

ಪಿ ಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ

9 ಮತ್ತು 10 ನೇ ತರಗತಿಗಳಿಗೆ ಪಾಠ ಬೋಧಿಸಲು ಪಿ ಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ)(ನೇಮಕಾತಿ)(ತಿದ್ದುಪಡಿ) ಕರಡು ನಿಯಮಗಳು -2026 ಇದು ರಾಜ್ಯದ 10,000 ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಕಳುಹಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ಕ್ರಮದ ಮೂಲ ಆಶಯಗಳಿಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘ ತೀವ್ರವಾಗಿ ಖಂಡಿಸಿದೆ. ಶಿಕ್ಷಣ ತಜ್ಞರು, ಶಿಕ್ಷಕರನ್ನು…

Read More

ಲಯನ್ಸ್ ಕ್ಲಬ್ ಸನ್ ಶೈನ್ : ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆ

ಉಡುಪಿ : ಲಯನ್ಸ್ ಜಿಲ್ಲೆ 317C ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ಜೋನ್ ಪ್ರಶಾಂತ್ ಗೋಮ್ಸ್, ಕೋಶಾಧಿಕಾರಿಯಾಗಿ ವಿಲ್ಫ್ರೆಡ್ ಡಿಸೋಜಾ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಎಂಟನೇ ವರ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು, ಪದಗ್ರಹಣ ಕಾರ್ಯಕ್ರಮವು ಜೂನ್ 26ರಂದು ನಡೆಯಲಿದೆ. ನೂತನ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ…

Read More

ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲಿನಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇದಿಕೆ ಉದ್ಘಾಟನೆ  ಹಾಗೂ ಗುರುನಮನಕಾರ್ಯಕ್ರಮ:

ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು ಇದರ 2025-26 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ಹಾಗೂ ಸಂಸ್ಥೆಯಲ್ಲಿ ಗರಿಷ್ಠ ಅಂಕಗಳಿಸಿದ ಸುಮಾರು 60 ವಿದ್ಯಾರ್ಥಿಗಳ ಮತ್ತು ‌ಎನ್ ಎಂ ಎಂ ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಎಂಟು ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವು ಮುನಿಯಾಲಿನ‌ ಶ್ರೀ ಪದ್ಮಾವತಿ ಕಲ್ಯಾಣ ಮಂದಿರದಲ್ಲಿ ನಡೆಯಿತು.‌ ವಿವಿಧ ವಿಷಯಗಳಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.‌ಇದೇ…

Read More

ಸಾಣೂರು ಯುವಕ ಮಂಡಲದಿಂದ ಗೌರವ ಅಭಿನಂದನ ಕಾರ್ಯಕ್ರಮ

*ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು.* ಇವರ ವತಿಯಿಂದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಪಡೆದ ಸಾಣೂರು ಗ್ರಾಮದ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇಲ್ಲಿನ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ *ಗೌರವ ಅಭಿನಂದನ ಕಾರ್ಯಕ್ರಮ* ದಿ. 14/6/26 ರಂದು ರೆಜೆನ್ಸಿ ಸಭಾಂಗಣ ಮುರತಂಗಡಿ ಸಾಣೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ…

Read More

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

ಉದ್ಯಾವರ : ವಿದ್ಯಾರ್ಥಿ ಜೀವನದಲ್ಲಿ ಫಲಿತಾಂಶ ಮಾತ್ರ ಮುಖ್ಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಫಲಿತಾಂಶದ ಸಾಧನೆಗೆ ಸನ್ಮಾನ ಅಂತ್ಯವಲ್ಲ. ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಅನಿಲ್ ಡಿಸೋಜಾ ತಿಳಿಸಿದರು. ಅವರು ಕಥೋಲಿಕ್ ಸಭಾ ಉದ್ಯಾವರ ಘಟಕದ ನೇತೃತ್ವದಲ್ಲಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ 15 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ,…

Read More

ಪಾರಂಪಳ್ಳಿ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ಇವರಿಂದ ಗುಡ್ಡೆ ಶಾಲೆ ಮಕ್ಕಳಿಗೆ ಕಲಿಕಾ ಪರಿಕರಗಳ ಹಸ್ತಾಂತರ

ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ ).ಪಾರಂಪಳ್ಳಿ ಪಡುಕೆರೆ ಇವರಿಂದ ಸತತ 14 ನೆ ವರ್ಷ ಉಚಿತ ನೋಟ್ ಬುಕ್ ಹಾಗೂ ಕಲಿಕೆ ಪರಿಕರಗಳನ್ನು ಗುಡ್ಡೆ ಶಾಲೆ ಮಕ್ಕಳಿಗೆ ಉಚಿತವಾಗಿ ನೀಡಲಾಯಿತು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶೇಷ ಐತಾಳ ವಹಿಸಿದ್ದರು. ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬಿನ ಗೌರವ ಅಧ್ಯಕ್ಷರಾದ ರಾಜೇಶ್ ಉಪಾಧ್ಯ, ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಕಾರ್ಯದರ್ಶಿ ಸುಧಾಕರ್ ಪೂಜಾರಿ ಸೇರಿದಂತೆ ಕೃಷ್ಣ. ಪಿ.,ಸುಧೀರ್ ಪೂಜಾರಿ, ಉಲ್ಲಾಸ್ ಪೂಜಾರಿ ಹಾಗೂ ಮುಖ್ಯ ಅತಿಥಿ ಯಾಗಿ ಅಶೋಕ್ ಸೋಮಯಾಜಿ ಅವರು…

Read More

ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮುಖ್ಯಮಂತ್ರಿಗಳಿಗೆ ಮನವಿ

ತುಳು ಭಾಷೆ , ಸಂಸ್ಕೃತಿ, ಹಾಗೂ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ, ಸಮಾಜ ಸೇವಕ, ಸಾಮಾಜಿಕ ನ್ಯಾಯದ ಹೋರಾಟಗಾರ, ಬಡವರ ಬಂಧು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಲಕ್ಷಾಂತರ ಜನರು ಇಂದಿಗೂ ವ್ಯವಹಾರಿಕ ಭಾಷೆಯಾಗಿ ಮತ್ತು ಇತ್ತೀಚೆಗೆ ಗ್ರಾಂಥಿಕ ಭಾಷೆಯಾಗಿ ಬಳಕೆ ಮಾಡುತ್ತಿದ್ದಾರೆ. ತುಳು…

Read More

ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ವತಿಯಿಂದ ಪುಸ್ತಕ ವಿತರಣೆ

ಗಂಟುಬೀಳು: ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಟುಬೀಳು ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಫೌಂಡೇಶನ್ ನ ಅಧ್ಯಕ್ಷರಾದ ಶ್ರೀಯುತ ಶಂಕರ್ ಐತಾಳ್ ಅವರು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವುದು ಮತ್ತು ಶೈಕ್ಷಣಿಕ ಸಾಧನಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪುಸ್ತಕ ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಶಾಲೆಯ ಆಡಳಿತ ಮಂಡಳಿಯು ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ಗೆ ಕೃತಜ್ಞತೆ ಸಲ್ಲಿಸಿತು.

Read More

ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ವತಿಯಿಂದ ಪುಸ್ತಕ ವಿತರಣೆ

ಗಂಟುಬೀಳು: ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಟುಬೀಳು ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಫೌಂಡೇಶನ್ ನ ಅಧ್ಯಕ್ಷರಾದ ಶ್ರೀಯುತ ಶಂಕರ್ ಐತಾಳ್ ಅವರು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವುದು ಮತ್ತು ಶೈಕ್ಷಣಿಕ ಸಾಧನಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪುಸ್ತಕ ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಶಾಲೆಯ ಆಡಳಿತ ಮಂಡಳಿಯು ಗೀತಾ ಹೆಚ್. ಎಸ್. ಎನ್. ಫೌಂಡೇಶನ್ ಗೆ ಕೃತಜ್ಞತೆ ಸಲ್ಲಿಸಿತು.

Read More

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ

ಹೆಜಮಾಡಿ ದೊಡ್ಡಮನೆ ನಿವಾಸಿ ಶ್ರೀಮತಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದರು.ಅಲ್ಲದೆ, ಅವರು ಹೆಜಮಾಡಿ ಬಿಲ್ಲವರ ಸಂಘದ…

Read More