ಗಂಟುಬೀಳು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಗಂಟುಬೀಳು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಟುಬೀಳು ಇಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ, ಭವಿಷ್ಯದಲ್ಲಿ ಪರಿಸರದ ಬಗ್ಗೆ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವಂತೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಗಿಡ ನೆಡುವ…

Read More

ಹೆಮ್ಮಾಡಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಜೆಸಿಐ ಕುಂದಾಪುರ ಸಿಟಿ, ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಮಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯತ್ ಹೆಮ್ಮಾಡಿ ಇವರುಗಳ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ ಹಾಗು ವಿದ್ಯಾರ್ಥಿಗಳಿಗೆ ಸಸಿ ನೀಡುವ ಕಾರ್ಯಕ್ರಮ ನಡೆಯಿತು. ಈ ಪ್ರಪಂಚ ನಮ್ಮ ಪ್ರಕೃತಿಯ ಮಡಿಲು ಈ ಮಡಿಲ ಕಣ ಕಣವು ನಮ್ಮೆಲ್ಲರ ಜೀವಾಳದ ಉಸಿರೇ ಈ ಪರಿಸರ,ನಾವಿರೋತನಕ ಇದನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಇದನ್ನು ನಿಷ್ಠೆಯಿಂದ ಪಾಲಿಸೋಣ,ಎಂದು ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ…

Read More

ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಅಂಪಾರು – ಸಂಪ್ರದಾಯದ ಸೊಬಗಿನಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ

ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಅಂಪಾರು – ಸಂಪ್ರದಾಯದ ಸೊಬಗಿನಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ ಶಿಕ್ಷಣದ ಪವಿತ್ರ ಪಯಣಕ್ಕೆ ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಬಗು ಸೇರಿಸಿ, ಅಂಪಾರಿನ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮಗಳು ಅತ್ಯಂತ ವೈಭವ, ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನೆರವೇರಿದವು.ಜೂನ್ 1ರಂದು ಶಾಲಾ ಪುನರಾರಂಭದ ಅಂಗವಾಗಿ ನುಕ್ಯಾಡಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಗಣಹೋಮ ನೆರವೇರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ…

Read More

ಹೊಸಂಗಡಿ ಕೆರೆಕಟ್ಟೆ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ28ನೇ ವರ್ಷದ ಪ್ರತಿಷ್ಠ ವರ್ಧಂತಿ ಮತ್ತು ಬ್ರಹ್ಮಕಲಶೋತ್ಸವ ಸಂಪನ್ನ

ಶ್ರೀ ಶಾಂತೇಶ್ವರ ದೇವಸ್ಥಾನ ಕೆರೆಕಟ್ಟೆ, ಹೊಸಂಗಡಿಇದರ 28ನೇ ವರ್ಷದ ಪ್ರತಿಷ್ಠ ವರ್ಧಂತಿ ಮತ್ತು ಬ್ರಹ್ಮಕಲಶೋತ್ಸವ ಜೂನ್ 2ರಂದು ವೇ | ಮೂ | ಸೂರ್ಯನಾರಾಯಣ ಬಾಯರು, ಶಂಕರನಾರಾಯಣ ಇವರ ನೇತೃತ್ವದಲ್ಲಿ ನೆರವೇರಿತು. ಬೆಳಿಗ್ಗೆ ಪುಣ್ಯಾಹವಾಚನ, ಪಂಚವಿಂಶತಿಕಲಶ, ಬ್ರಹ್ಮಕುಂಭ ಸ್ಥಾಪನೆ, ಪ್ರಧಾನ ಕಲಾತತ್ವಾಧಿವಾಸ ಹೋಮ, ರುದ್ರಾಭಿಷೇಕ, ಹಾಗು ಮಹಾಮಂಗಳಾರತಿ ಪೂಜೆ ನಡೆಯಿತು.ಬಳಿಕ ಮಹಾ ಅನ್ನಸಂತರ್ಪಣೆ ನೆರೆವೇರಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಡಳಿತ ಮುಕ್ತೆಸರರಾದ ಹೆಚ್. ರಾಮಕೃಷ್ಣ ಆಚಾರ್ಯ ಹಾಗು ಅರ್ಚಕರು. ಆಡಳಿತ ಮಂಡಳಿ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತಿ ಇದ್ದರು

Read More

*ಬೋಧನೆಯ ಜೊತೆ ಪ್ರತಿಭೆಯ ಬೆಳ್ಳಿ ಬೆಳಕು — ರಾಜ್ಯಮಟ್ಟದಲ್ಲಿ ಮಿಂಚಿದ ಗುರುಪ್ರಸಾದ್

ಶಾಲೆಯ ಶಿಕ್ಷಕರು ಕೇವಲ ಪಾಠ ಬೋಧನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ವಿದ್ಯಾರ್ಥಿಗಳಿಗೆ ಅದೊಂದು ಮಹತ್ತರ ಪ್ರೇರಣೆಯಾಗುತ್ತದೆ. ಅಂತಹ ಅಪೂರ್ವ ಸಾಧನೆಯನ್ನು ಮಾಡಿ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಎತ್ತಿಹಿಡಿದವರು ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ತೂರು ಇಲ್ಲಿಯ ಕ್ರಿಯಾಶೀಲ ಹಾಗೂ ಬಹುಮುಖ ಪ್ರತಿಭೆಯ ಶಿಕ್ಷಕರಾದ ಶ್ರೀ ಗುರುಪ್ರಸಾದ್ ಸರ್.ಬೆಂಗಳೂರು ನಗರದ ಪ್ರತಿಷ್ಠಿತ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ನೃತ್ಯ…

Read More